
ಈ ಬ್ಲಾಗು ಸಂಪೂಣ೯ ಪತ್ರಕತ೯ರಿಗೆ ಅಪಿ೯ತವಾದದ್ದು. ನಿಮ್ಮ ವೈಯುಕ್ತಕ ಪರಿಚಯ, ಹಲವು ದಿನಗಳಿಂದ, ಹಲವು ಕಾರಣಗಳಿಂದ ಪ್ರಕಟಿಸದೇ ಇರುವ ಲೇಖನವನ್ನು ನಮಗೆ ಕಳುಹಿಸಿ. ಅದನ್ನು ನಾವು ಪ್ರಕಟಿಸುತ್ತೇವೆ. ಪ್ರಕಟಣೆಗೆ ಕಳುಹಿಸುವ ಲೇಖನವನ್ನು ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಿರಿ. ಭಾಷೆ ಆಯ್ಕೆ ನಿಮಗೆ ಬಿಟ್ಟಿದ್ದು, ಆದಷ್ಟು ಕನ್ನಡವಾಗಿದ್ದರೆ ಉತ್ತಮ ಎಂಬುದು ನಮ್ಮ ಅನಿಸಿಕೆ; ಕನ್ನಡದಲ್ಲಿದ್ದರೆ, ಬಹಳಷ್ಟು ಜನ ಓದುತ್ತಾರೆ. ಇಂಗ್ಲೀಷಿನಲ್ಲಿದ್ದರೆ ಕೆಲವರಿಗೆ ಮಾತ್ರ ಸೀಮಿತವಾಗಿ ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಒತ್ತುಕೊಡಿ. ಒಂದು ವೇಳೆ ಇಂಗ್ಲೀಷ್ ಭಾಷೆಯಲ್ಲಿದ್ದು ಅದನ್ನು ಕನ್ನಡ ಅನುವಾದಿಸುವುದಿದ್ದರೆ, ಹಾಗೆಂದು ಸೂಚಿಸಿ, ತಜು೯ಮೆ ಕೆಲಸವನ್ನು ನಾವು ಮಾಡುತ್ತೇವೆ.
ಸರೀನಾ? ತಡ ಏಕೆ? ಬರೀರಿ. ಬರೆದು patilvg565@gmail.comಗೆ ಮೇಲ್ ಮಾಡಿ.